ಹಿರಿಯ ನಾಗರಿಕರಿಗಾಗಿ ಸಂಧ್ಯಾ ಸುರಕ್ಷಾ ಯೋಜನೆ
ಜೀವನದಲ್ಲಿ ಮರಣ ಮತ್ತು ಮುಪ್ಪು ಇವು ಅನಿವಾರ್ಯ ಅವಸ್ಥೆಗಳು. ಅದರಲ್ಲಿ ಮುಪ್ಪು ಅಸಹನೀಯ ಮತ್ತು ಆರ್ಥಿಕ ತೊಂದರೆಯ ಸನ್ನಿವೇಶವಾಗಿದೆ. ಹಿರಿಯ ನಾಗರೀಕರ ಜೀವನ ಸಂಧ್ಯಾ ಜೀವನ. ಎಷ್ಟೋ ಕುಟುಂಬಗಳಲ್ಲಿ ಈ ಜೀವನ ಸುಖಮಯವಾಗಿ ಸಾಗದೇ ಇದ್ದುದ್ದನ್ನು ಮನಗಂಡು ಅವರಿಗೆ ಹಣಕಾಸಿನ ಸಹಾಯ ಅತ್ಯವಶ್ಯಕ ಎಂಬುವುದನ್ನು ಅರಿತು ಮಾನ್ಯ ಹಣಕಾಸು ಸಚಿವರು ಮತ್ತು ಉಪ ಮುಖ್ಯ ಮಂತ್ರಿಗಳಾದ ಶ್ರೀ ಯಡಿಯೂರಪ್ಪರವರು ಆಧಾರ ಸ್ತಂಭವಾಗಿ ನಿಂತುಕೊಂಡು 2007-08ನೇ ಸಾಲಿನ ಆಯವ್ಯಯದ ಪ್ರಸ್ತಾವನೆಯಲ್ಲಿ ಈ ಯೋಜನೆಯನ್ನು ಘೋಷಿಸಿದರು.ಬೆಳಗಾವಿ ಜಿಲ್ಲೆ ರಾಮದುರ್ಗ ಮತ್ತು ಬೆಳಗಾವಿ ತಾಲೂಕುಗಳಲ್ಲಿ ಈಗಾಗಲೇ ಶಾಸಕರು ಮುಂದಾಳುತನ ವಹಿಸಿ ಅರಿವು ನೆರವಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾಗಿದೆ. ಈ ಯೋಜನೆಯ ಲಾಭ ಪಡೆಯುವುದಕ್ಕಾಗಿ ಅರ್ಜಿ ನಮೂನೆಗಳನ್ನು ರಚಿಸಿ ಪೂರೈಸಲಾಗುತ್ತಿದೆ. ಮಾಹಿತಿ ಹಕ್ಕು ಕಾಯಿದೆ 2005 ಜಾರಿಯಲ್ಲಿ ಬಂದು ಮೂರು ವರ್ಷಗಳು ಪೂರ್ತಿಯಾಗುತ್ತಲಿವೆ. ಆಡಳಿತದಲ್ಲಿ ಸರ್ಕಾರವು ಜನರ ಸಹಭಾಗಿತ್ವ ಮತ್ತು ಉತ್ತರ ದಾಯಿತ್ವಕ್ಕೆ ಸಮಾಧಾನಕರವಾಗಿ ಆದ್ಯತೆ ನೀಡುತ್ತಿಲ್ಲ. ಸರ್ಕಾರ ಹೊಸ ಸಂಧ್ಯಾ ಸುರಕ್ಷಾ ಯೋಜನೆ ಜಾರಿಗೆ ತಂದು ನಮೂನೆಗಳನ್ನು ರಚಿಸಿ ಹಿರಿಯ ನಾಗರೀಕರಿಗೆ ಕೈಪಿಡಿಗಳನ್ನು ಹಂಚಲಾಗುತ್ತಿದೆ. ಇದರಲ್ಲಿ ಕಚೇರಿ ಕೆಲಸಕ್ಕೆ ಸಂಬಂಧಪಟ್ಟ ನಮೂನೆಗಳು ಸೇರಿವೆ. ಫಲಾನುಭವಿಗಳಿಗೆ ಸಂಬಂಧಪಟ್ಟಂತೆ ಮಾತ್ರ ಕೈಪಿಡಿಗಳನ್ನು ರಚಿಸಿ ಹಂಚುವದಾಗಬೇಕು. ದಿನಾಂಕ:4-7-2007ರ ರಾಜ್ಯಪತ್ರದಲ್ಲಿ ಪ್ರಕಟವಾದ ಸಂಬಂಧಪಟ್ಟ 12 ಪುಟಗಳ ಆದೇಶ ಪ್ರತಿಯನ್ನು ಮಾತ್ರ ಪೂರೈಕೆ ಮಾಡಿದ್ದಾಗಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯರು ಲಾಭ ಪಡೆಯಲು ಅವಕಾಶವಾಗುತ್ತಿತ್ತು. ಅಥವಾ ಮಾಹಿತಿ ಹಕ್ಕು 2005ರ ಪ್ರಕರಣ 4(1)ರ ಮಾರ್ಗದರ್ಶಿ ಸೂತ್ರಗಳನ್ನಾಧರಿಸಿ ಒಂದು ಚಿಕ್ಕ ಕೈಪಿಡಿ ಮಾಡಿ ಪೂರೈಕೆ ಮಾಡಬೇಕಾಗಿತ್ತು. ನಮೂನೆಯಲ್ಲಿ ಈ ಯೋಜನಾ ಆದೇಶದ ನಿಯಮಗಳನ್ನು ಬದಿಗಿಟ್ಟು ಪಂಚ ಜನರನ್ನು ಕರೆಯಿಸಿ, ಪಂಚನಾಮಾ ಮಾಡಿ ಗ್ರಾಮ ಪಂಚಾಯತ ಸದಸ್ಯರು ಮತ್ತು ಕಾರ್ಯದರ್ಶಿಗಳ ರುಜು ಪಡೆಯುವ ಕಾರ್ಯ ವೈಖರಿಯು ವಸ್ತು ನಿಷ್ಠ ಅರ್ಥ ಮತ್ತು ಔಚಿತ್ಯ ಪೂರ್ಣವೆನಿಸುವುದಿಲ್ಲ. ವಿಚಾರಣಾಧಿಕಾರಿಗಳು ಗ್ರಾಮ ಮಟ್ಟದ ಪ್ರಾಥಮಿಕ ಸಿಬ್ಬಂದಿಯಾದ ಗ್ರಾಮಲೆಕ್ಕಾಧಿಕಾರಿಗಳು ಮತ್ತು ಗ್ರಾಮ ಸಹಾಯಕರ ಸಹಾಯ ಪಡೆದು ಖುದ್ದಾಗಿ ಚೌಕಶಿ ಮಾಡಿ ಇವರ ವರದಿ ಪಡೆದು ಅರ್ಜಿ ವಿಲೇವಾರಿ ಮಾಡುವುದು ಒಳಿತು.
ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಸಹ ದಿನಾಂಕ:19-7-2007ರ "ಸಂವಾದ" ರೇಡಿಯೋ ಕಾರ್ಯಕ್ರಮದಲ್ಲಿ ಇದನ್ನೇ ತಿಳಿಹೇಳಿದ್ದಾರೆ. ಆಂಗ್ಲಭಾಷೆಯಲ್ಲಿ ಆದೇಶ ಹೊರಡಿಸಿರುವುದು ಸಹಾ ಸೂಕ್ತವೆನಿಸುವುದಿಲ್ಲ. ಇದನ್ನು ಕನ್ನಡದಲ್ಲಿ ಅನುವಾದಿಸಿ ಪ್ರಾಧಾನ್ಯತೆ ನೀಡಿ ಮತ್ತೊಮ್ಮೆ ಸಹಕಾರದಿಂದ ಪ್ರಕಟಿಸುವುದಾಗಬೇಕು. ಆದೇಶ ಜನರಾಡುವ ಭಾಷೆಯಲ್ಲಿಯೇ ಇದ್ದರೆ ಒಳಿತು. ತಹಶೀಲ್ದಾರ ಬೆಳಗಾವಿ ಇವರು ಕನ್ನಡದಲ್ಲಿ ನಮೂನೆಗಳನ್ನು ಪುರೈಸುತ್ತಿದ್ದುದು ಸುತ್ತ್ಯಾರ್ಹವಾಗಿದೆ. ಈ ಅಂಶಗಳ ಮೇಲೆ ಸೂಕ್ತ ಕ್ರಮಕ್ಕಾಗಿ ಹಿರಿಯ ನಾಗರೀಕರು ಕಾರ್ಯತತ್ಪರವಾಗಬೇಕಾಗಿದೆ. ಅಂದಾಗ ಮಾತ್ರ ಲಾಭ ಪಡೆಯಲು ಸಾಧ್ಯ.
ಈಗಾಗಲೇ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳು ಕೆಳಕಂಡಂತಗೆ ಜಾರಿಯಾಗಿವೆ.* ಅನ್ನಪೂರ್ಣ ಯೋಜನೆ * ಅಂತ್ಯೋದಯ ಯೋಜನೆ * ವೃದ್ದಾಪ್ಯ ಯೋಜನೆ.
* ಅಂತ್ಯ ಸಂಸ್ಕಾರ ಸಹಾಯ ಧನ ಯೋಜನೆ. *ರಾಷ್ಟ್ರೀಯ ಕುಟುಂಬ ನೆರವು ಯೋಜನೆ * ವಿಧವಾ ಪಿಂಚಣಿ ಯೋಜನೆ.
* ವಿಕಲಾಂಗ ಪಿಂಚಣಿ * ಶಿಶು ಜನನಿ ಸುರಕ್ಷಾ ಯೋಜನೆ ( ಹಿಂದಿನ ರಾಷ್ಟ್ರೀಯ ಹೆರಿಗೆ ಭತ್ತೆ ಯೋಜನೆ)
*ದೇವದಾಸಿ ಪಿಂಚಣಿ ಯೋಜನೆ * ಆದರ್ಶ ವಿವಾಹ ಯೋಜನೆ * ಭಾಗ್ಯಲಕ್ಷ್ಮಿ ಯೋಜನೆ.
ಇವುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಗಳಿಗೂ ಪತ್ರಾಂಕಿತ ಅಧಿಕಾರಿಗಳನ್ನು ನಿಯೋಜಿಸಿ ರಾಜ್ಯಮಟ್ಟದಲ್ಲಿ ನಿರ್ದೇಶನಾಲಯವನ್ನು ಆರಂಭ ಮಾಡಲು ಕ್ರಮ ಕೈಕೊಳ್ಳಲಾಗಿದೆ. ಮೇಲಿನ ಯೋಜನೆಗಳಂತೆಯೇ ಈ ಯೋಜನೆಯಿಂದ ಸಹ ಹಿರಿಯರಿಗೆ ಸಾಮಾಜಿಕ ಭದ್ರತಾ ವೇತನ ಸೌಲಭ್ಯ ನೀಡಿ ಅವರ ದಯನೀಯ ಸ್ಥಿತಿ ಸುಧಾರಿಸಲು ಕ್ರಮ ಕೈಕೊಳ್ಳಲಾಗಿದೆ. ಸರ್ಕಾರದ ಕ್ರಮ ಮೆಚ್ಚುವಂತಹದು. ಮತ್ತು ಮಾನವೀಯತೆಯುಳ್ಳದ್ದು.
ಈ ಯೋಜನೆಯ ಆದೇಶದಲ್ಲಿ 42 ನಿಯಮಗಳಿವೆ. ಇವುಗಳಲ್ಲಿ ಫಲಾನುಭವಿಗಳಿಗೆ ಅವಶ್ಯವಿದ್ದ ಕೆಳಕಂಡ ನಿಯಮಗಳ ವಿವರವನ್ನು ಮಾತ್ರ ಕ್ರಮವಾಗಿ ಇಲ್ಲಿ ನೀಡಲಾಗಿದೆ.
1. ಈ ನಿಯಮಗಳು ಸಂಧ್ಯಾ ಸುರಕ್ಷಾ ಯೋಜನೆಯ ನಿಯಮಗಳೆಂದು ಕರೆಯಲ್ಪಡುತ್ತವೆ.
2. ಈ ನಿಯಮಗಳು ಇಡೀ ರಾಜ್ಯಕ್ಕೆ ಅನ್ವಯವಾಗುತ್ತವೆ.
3. ದಿನಾಂಕ:29.7.2007 ರಿಂದ ಇವು ಜಾರಿಯಲ್ಲಿ ಬಂದಿರುತ್ತವೆ.
4. ವೃದ್ಧರಿಗೆ ಸಾಮಾಜಿಕ ಭದ್ರತಾ ವೇತನ ನೀಡಿ ಅವರ ಯಾತನಾಮಯಿ ಸಮಸ್ಯೆಗಳಿಗೆ ಅಲ್ಪ ಪರಿಹಾರ ನೀಡುವದೇ ಈ ನಿಯಮಗಳ ....ಉದ್ದೇಶವಾಗಿದೆ.
5. ನಿಯಮ 6ರಲ್ಲಿ ನಮೂದಿಸಿದ ಎಲ್ಲ ಮಾರ್ಗದರ್ಶಿ ಸೂತ್ರಗಳ ಮೇರೆಗೆ ಈ ಯೋಜನೆ ಎಲ್ಲರಿಗೂ ಅನ್ವಯವಾಗುತ್ತದೆ.
6. ಅರ್ಹ ಫಲಾನುಭವಿಗಳಿಗೆ ರೂ.400.00 ಸಾಮಾಜಿಕ ಭದ್ರತಾ ವೇತನ ನೀಡಲಾಗುತ್ತದೆ. ಆದರೆ ಅವರು ಕೆಳಕಂಡ ನಿರ್ಭಂದನೆಗಳಿಗೆ....
ಅರ್ಹರಿದ್ದರೆ ಮಾತ್ರ.
i) ವೃದ್ಧ ವೃದ್ಧೆಯರು 65 ಅಥವಾ ಹೆಚ್ಚಿನ ವಯಸ್ಸಿನವರಾಗಿರತಕ್ಕದ್ದು.
ii) ಕಂದಾಯ ಪ್ರಾಧಿಕಾರದ (ಸ್ಥಾನಿಕ) ಪ್ರಮಾಣ ಪತ್ರದ ಮೇರೆಗೆ ಉದ್ದೇಶಿತ ಫಲಾನುಭವಿಯ ಪತಿ ಅಥವಾ ಪತ್ನಿಯ ಒಟ್ಟು ಸಂಯೋಜಿತ ವಾರ್ಷಿಕ
ಆದಾಯ ರೂ. 20,000/- ಮೀರತಕ್ಕದ್ದಲ್ಲ.
iii)ಫಲಾನುಭವಿಗಳೇ ಆದಾಯದ ಘೋಷಣೆ ಮಾಡಿದ್ದಲ್ಲಿ ಅವರ ಪ್ರೌಢ ಮಕ್ಕಳ ಆದಾಯವನ್ನು ಪರಿಗಣಿಸಬಾರದು.
iv)ಫಲಾನುಭವಿಯ ಕುಟುಂಬದ ಸಂಯುಕ್ತ ಠೇವಣಿಯ ಮೌಲ್ಯ ರೂ.10,000/- ಮೀರತಕ್ಕದ್ದಲ್ಲ.(ಠೇವಣಿ ಶಪಥ ಪತ್ರ ಲಗತ್ತಿಸತ್ಕ್ಕದ್ದು).
v) ಈಗಾಗಲೇ ವೃದ್ದಾಪ್ಯ ವೇತನ, ವಿಧವಾ ವೇತನ, ಕುಟುಂಬ ಪಿಂಚಣಿ, ಅಂಗವಿಕಲ ವೇತನ, ದೇವದಾಸಿ ವೇತನ ಅಥವಾ ಇನ್ಯಾವದೇ ವೇತನ
ಪಡೆಯುತ್ತಿದ್ದಲ್ಲಿ ಈ ಯೋಜನೆಯ ಲಾಭ ಅಂಥವರಿಗೆ ಅನ್ವಯವಾಗುವುದಿಲ್ಲ.
vi) ಈ ಯೋಜನೆಯು ಸಣ್ಣ ರೈತರು, ಅತೀ ಸಣ್ಣ ರೈತರು, ಕೃಷಿ ಕೂಲಿಕಾರರು, ನೇಕಾರರು, ಮೀನುಗಾರರು, ಮತ್ತು ಅಸಂಘಟಿತ ವಲಯದ
ಸಾಮಾಜಿಕ ಭದ್ರತಾ ಸುರಕ್ಷತೆ ಇಲ್ಲದ ಎಲ್ಲ ಕಾರ್ಮಿಕರಿಗೆ ಅನ್ವಯವಾಗುತ್ತದೆ. ಉದಾ: ಹೊಟೇಲ ಕಾರ್ಮಿಕ, ಅಗರಬತ್ತಿ ತಯಾರಕರು, ಮನೆ
ಕೆಲಸದವರು, ಟಿಂಬರ ಕಾರ್ಮಿಕ, ಕಲ್ಲು ಒಡೆಯುವವ, ವಾಣಿಜ್ಯ ಅಂಗಡಿಗಳಲ್ಲಿಯ ಕಾರ್ಮಿಕರು, ಚಮ್ಮಾರರು, ಉತ್ಪಾದನೆ ಮತ್ತು ಮಾರಾಟದ
ಕೆಲಸ (10 ಕ್ಕಿಂತ ಕಾರ್ಮಿಕರಿದ್ದ) ಔದ್ಯೋಗಿಕ ನಿಯಂತ್ರಣ ಮತ್ತು ..... ಸೇವಾ........ನಿಯಮಗಳ ಅಧಿನಿಯಮ 1996ರ ಮೇರೆಗೆ ಅನ್ವಯಿಸುವ
ಕಟ್ಟಡ ಕಾರ್ಮಿಕರಿಗೆ ಇದು ಅನ್ವಯವಾಗುವುದಿಲ್ಲ.
7) ಫಲಾನುಭವಿಗಳು ರಾಜ್ಯದ ಯಾವುದೇ ಭಾಗದಲ್ಲಿ ಇದ್ದರು ಮಾಸಾಶನ ರೂ.400/- ಗಳಿಗೆ ಮಾತ್ರ ಅರ್ಹರಾಗಿರುತ್ತಾರೆ.
8) ಫಲಾನುಭವಿಗಲು ಅವರ ಮರಣದ ವರೆಗೆ ಮಾಸಾಶನಕ್ಕೆ ಅರ್ಹರಿರುತ್ತಾರೆ. (ನಿಯಮ-6ರಲ್ಲಿಯ ನಿಬಂಧನೆಗೊಳಗೊಂಡಂತೆ).
9) ಕ್ಷೇತ್ರಕ್ಕೆ ಸಂಬಂಧಪಟ್ಟ ತಹಶೀಲ್ದಾರರು, ಮಾಸಾಶನ ಮಂಜೂರಿ ಅಧಿಕಾರಿಗಳಾಗಿರುತ್ತಾರೆ.
10) ತಹಶೀಲ್ದಾರರು ಮತ್ತು ಅವರ ಸಹಾಯಕ ಅಧಿಕಾರಿಗಳು ಚೌಕಶಿ ಅಥವಾ ಪರಿಶೀಲನಾ ಅಧಿಕಾರಿಗಳಾಗಿರುತ್ತಾರೆ.
(1) ಅರ್ಜಿದಾರರು ಸಂಸುಯೊ ನಮೂನೆ-1ರಲ್ಲಿ ದ್ವಿ ಪ್ರತಿಯೊಂದಿಗೆ ಮಾಹಿತಿ ಒದಗಿಸಿದಲ್ಲಿ (ಪ್ರತಿಯನ್ನು ಮಾಹಿತಿಗಾಗಿ ಕೊಡಲಾಗಿದೆ) (2)
ರಾಜ್ಯ/ಲೋಕಸಭಾ/ಶಾಸನಸಭೆ/ಮಂತ್ರಿ ಮಂಡಲದ ಸದಸ್ಯರು, ಪಂಚಾಯತ ಅಧ್ಯಕ್ಷರು, ಚಾರಿಟೇಬಲ್ ಸಂಸ್ಥೆಗಳ ವ್ಯವಸ್ಥಾಪಕರು,
ರಾಜ್ಯ/ಕೇಂದ್ರ ಸರ್ಕಾರದ ಪತ್ರಾಂಕಿತ ಅಧಿಕಾರಿಗಳು ಅರ್ಜಿದಾರರ ನಮುನೆ-1ರೊಂದಿಗೆ ತಿಳಿಸಿದಲ್ಲಿ.
11) ಸಂ.ಸು.ಯೋ ನಮೂನೆ-1ನ್ನು ಸ್ಥಾನಿಕ ಸಂಸ್ಥೆ ಅಥವಾ ತಹಶೀಲ್ದಾರ ಕಛೇರಿಯಿಂದ ಪಡೆಯುವುದು ಲಭ್ಯವಿರದಾಗ ಕೈಬರಹದ ನಮುನೆಯಲ್ಲಿ
ಸಹ ತಹಶೀಲ್ದಾರರಿಗೆ ಅರ್ಜಿ ಮಾಡುವುದಾಗಿದೆ. ಅರ್ಜಿಗೆ ಕೋರ್ಟ ಫೀ ಸ್ಟ್ಯಾಂಪ್ ಹಚ್ಚುವ ಅಗತ್ಯವಿಲ್ಲ.
12) ಅರ್ಜಿ ಮುಟ್ಟಿದ ಕೂಡಲೇ ಲಗತ್ತಿಟ್ಟ ಸಂಸುಯೊ ನಮೂನೆ-1(ಎ) (ನಿಯಮ-12) ದಲ್ಲಿ ತಹಶೀಲ್ದಾರರು ಸ್ವೀಕೃತಿ ಪತ್ರವನ್ನು ಅರ್ಜಿದಾರರಿಗೆ
ನೀಡುವುದು.
14) ಅರ್ಜಿದಾರರು ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ಪೂರ್ತಿಯಾಗಿ ತುಂಬದೇ ಇದ್ದಲ್ಲಿ ತನಿಖಾಧಿಕಾರಿಗಳುಅದನ್ನು ಚೌಕಶಿ ಮಾಡಿ ಪೂರ್ತಿ
ತುಂಬಿಸಿ ಅರ್ಜಿದಾರರಿಮದ ರುಜು ಪಡೆಯುವುದು.
15) ಚೌಕಶಿ ಅಧಿಕಾರಿಗಳು (ಕಂದಾಯ ನಿರೀಕ್ಷಕರು)ಅರ್ಹ ವಯಸ್ಸಿನ ಖಾತ್ರಿಗಾಗಿ ಭಾರತ ಚುನಾವಣಾ ಆಯೋಗದ ಗುರುತಿನ ಚೀಟಿ ಅಥವಾ
ಇನ್ನಾವುದೇ ಅಧಿಕೃತ ದಾಖಲೆಯನ್ನು ಪರಿಶೀಲನೆ ಮಡುತ್ತಾರೆ. ಚೊಕ್ಕ ಸಂಶಯ ಇದ್ದಲ್ಲಿ ಸಮೀಪದ ಸರ್ಕಾರಿ ಪ್ರಾಥಮಿಕ ಆರೊಗ್ಯ ಕೇಂದ್ರ
ಅಥವಾ ಇತರೆ ಸರ್ಕಾರಿ ಆಸ್ಪತ್ತೆ ವೈದ್ಯರಿಂದ ಮಾಹಿತಿ ಪಡೆದು ತೀರ್ಮಾನಕ್ಕೆ ಬರುತ್ತಾರೆ.
17) ತಹಶೀಲ್ದಾರರು ಅರ್ಜಿಯನ್ನು ಮಂಜೂರಿ ಮಾಡದಿದ್ದಲ್ಲಿ ಸದರಿ ದಿನಾಂಕದಿಂದ ಒಂದು ವಾರದೊಳಗೆ ಸಕಾರಣ ಸಹಿತ ಅರ್ಜಿದಾರರಿಗೆ
ತಿಳಿಸುವುದು.
18) ತಹಶೀಲ್ದಾರರು ಅರ್ಜಿ ಸ್ವೀಕೃತಿಯಾದ ನಂತರ ಗರಿಷ್ಠ ಎರಡು ತಿಂಗಳೊಳಗೆ ಅದನ್ನು ವಿಲೆ ಮಾಡತಕ್ಕದ್ದು.
28) ಫಲಾನುಭವಿಗಳು ಅವರ ವಾಸದ ವಿಳಾಸ ಬದಲವಣೆಯಾದಲ್ಲಿ ಕೂಡಲೆ ತಹಶೀಲ್ದಾರರಿಗೆ ತಿಳಿಸುವುದು.
29) ಜಿಲ್ಲಾ/ಉಪ ಖಜಾನೆ ಅಧಿಕಾರಿಗಳು ಫಲಾನುಭವಿಗಳ ಅಂಚೆ ಉಳಿತಾಯ ಖಾತೆ ಅಥವಾ ಬ್ಯಾಂಕ್ ಉಳಿತಾಯ ಖಾತೆಗೆ ಮಾಸಾಶನ
ಸಂದಾಯದ ವ್ಯವಸ್ಥೆ ಮಾಡತಕ್ಕದ್ದು.
36) (i) ತಹಶೀಲ್ದಾರ್ರು ಸಂ.ಸು.ಯೋ ನಮುನೆ-8ರಲ್ಲಿ ಪಿಂಚಣಿದಾರರಿಗೆ ಗುರುತಿನ ಚೀಟಿಯನ್ನು ನೀಡುವುದು. ತನಿಖಾ ಸಮಯದಲ್ಲಿ
ಫಲಾನುಭವಿಗಳು ಇದನ್ನು ತಪ್ಪದೇ ತೋರಿಸುವುದು.
(iii) ಫಲಾನುಭವಿಗಳು ತಮ್ಮ ಅರ್ಜಿ ಕೂಡಾ ಪಾಸ ಪೋರ್ಟ ಆಕಾರದ ನಾಲ್ಕು ಪೋಟೋಗಳನ್ನು ಸ್ವಂತ ಖರ್ಚಿನಲ್ಲಿ ತಹಶೀಲ್ದಾರರಿಗೆ
ಒದಗಿಸುವುದು. ತಹಶೀಲ್ದಾರರಿಗೆ ಇದರಿಂದ ಸಮಯಕ್ಕೆ ಸಂಸುಯೋ ನಮೂನೆ-8ರಲ್ಲಿ ಗುರುತಿನ ಚೀಟಿ ನೀಡಲಿಕ್ಕೆ
ಅನುಕೂಲವಾಗುವುದು.
ಸಂಧ್ಯಾ ಸುರಕ್ಷಾ ಯೋಜನೆಯ ಲಾಭ ಪಡೆಯಲು ಹಿರಿಯ ನಾಗರೀಕರು ಅನುಸರಿಸಬೇಕಾದ ಜವಾಬ್ದಾರಿಗಳು:-
1) ನಿಯಮ-6ರ ಮೇರೆಗೆ ವಯಸ್ಸಿನ ಪ್ರಮಾಣ ಪತ್ರಕ್ಕಾಗಿ (65 ವರ್ಷ ಮತ್ತು 65ಕ್ಕಿಂತ ಹೆಚ್ಚು ವಯಸ್ಸಾದವರ ಬಗ್ಗೆ) ಭಾರತ ಚುನಾವಣಾ ಆಯೋಗದ ಮತದಾರರ ಗುರುತಿನ ಚೀಟಿ, ಪಾಸಪೋರ್ಟ, ವಾಹನ ಚಾಲನಾ ಲಾಯಸನ್ಸ ಪ್ರಾಥಮಿಕ/ಪ್ರೌಢಶಾಲಾ ಬಿಡುಗಡೆ ಪ್ರಮಾಣ ಪತ್ರ, ಅಂಗವಿಕಲ ಮತ್ತು ಹಿರಿಯ ನಾಗರೀಕ ಕಲ್ಯಾಣ ಇಲಾಖೆಯ ಗುರುತಿನ ಚೀಟಿ ಜನನ ಪ್ರಮಾಣ ಪತ್ರ ಇವುಗಳಲ್ಲಿ ಯಾವುದಾದರೊಂದರ ದೃಢೀ
ಕೃತ ಪ್ರತಿಯನ್ನು ಅರ್ಜಿಗೆ ಲಗತ್ತಿಸುವುದು. ಜನನ ಪ್ರಮಾಣ ಪತ್ರವಿಲ್ಲದಲ್ಲಿ ಅದನ್ನು ಹುಟ್ಟಿದ ಊರಿನ ತಾಲೂಕಿನ ತಹಶೀಲ್ದಾರರಿಂದ ಪಡೆಯುವುದು. ಲಭ್ಯವಾಗದೆ ಇದ್ದಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ವಯಸ್ಸಿನ ಪ್ರಮಾಣ ಪತ್ರ ಪಡೆಯುವುದು.
2) ಕೃಷಿ ಕೂಲಿಕಾರ, ಸಣ್ಣ/ಅತಿಸಣ್ಣ ರೈತರು ಪ್ರಚಲಿತ ಮಾರ್ಗದರ್ಶಿ ಸೂತ್ರಗಳ ಮೇರೆಗೆ ತಹಶೀಲ್ದಾರರಿಮದ ಪ್ರಮಾಣ ಪತ್ರ ಪಡೆಯುವುದು.
ಸಾಮಾಜಿಕ ಸುರಕ್ಷಾ ಭದ್ರತೆ ಇಲ್ಲದ ಅಸಂಘಟಿತ ಕ್ಷೇತ್ರದ ಕಾರ್ಮಿಕರು ಸಹ ಅವಶ್ಯಕ ಮಾಹಿತಿ ಒದಗಿಸಿ ತಹಶೀಲ್ದಾರರಿಂದ ಸಂ.ಸು.ಯೋ
ನಮೂನೆ-1 (ಬ9) ಯಲ್ಲಿ ಪ್ರಮಾಣ ಪತ್ರ ಪಡೆಯುವುದು. ಇವುಗಳ ದೃಢೀಕೃತ ಪ್ರತಿಯನ್ನು ಅರ್ಜಿಗೆ ಲಗತ್ತಿಸುವುದು.
3) ತಹಶೀಲ್ದಾರರಿಂದ ರಹವಾಸಿ ಪ್ರಮಾಣ ಪತ್ರ ಪಡೆಯಲು ಅವಶ್ಯಕ ಪ್ರಶ್ನಾವಳಿ ತಖ್ತೆಯನ್ನು ಪಡೆದು ಮಾಹಿತಿ ಒದಗಿಸುವುದು. ಪ್ರಮಾಣ ಪತ್ರ
ಪಡೆದು ಅದರ ದೃಢೀಕೃತ ಪ್ರತಿಯನ್ನು ಅರ್ಜಿಗೆ ಲಗತ್ತಿಸುವುದು.
4) ಅರ್ಜಿದಾರರ ಹಾಗೂ ಅವರ ಪತಿ ಪತ್ನಿಯರ ಹೆಸರಿನಲ್ಲಿರುವ ಠೇವಣಿ ಮೊತ್ತ ರೂ.10,000/- ಮೀರದಂತೆ ಠೇವಣಿ ರೀತಿ ಮತ್ತು
ಬ್ಯಾಂಕ/ಸಂಸ್ಥೆಯ ವಿಳಾಸದೊಂದಿಗೆ ಶಪಥ ಪತ್ರ ಮಾಡಿ ಅರ್ಜಿಗೆ ಲಗತ್ತಿಸುವುದು.
5) ಗ್ರಾಮ ಲೆಕ್ಕಾಧಿಕಾರಿಗಳಿಂದ ಪಡೆದ ವಾರ್ಷಿಕ ಆದಾಯ ಪ್ರಮಾಣ ಪತ್ರವನ್ನು ಅರ್ಜಿಯ ಕೂಡ ಸಲ್ಲಿಸುವುದು.
ನಿಯಮ-10 (II)ರಲ್ಲಿ ಸೂಚಿಸಿದ ಜನ ಪ್ರತಿನಿಧಿಗಳು ಧಾರ್ಮಿಕ ಸಂಸ್ಥೆಗಳ ವ್ಯವಸ್ಥಾಪಕರು ಮತ್ತು ರಾಜ್ಯ/ಕೇಂದ್ರ ಸರ್ಕಾರಗಳ ಪತ್ರಾಂಕಿತ ಅಧಿಕಾರಿಗಳ ಶಿಫಾರಸ್ಸಿನೊಂದಿಗೆ ಅರ್ಜಿ ಸಲ್ಲಿಸಲು ಸಹ ಅಡ್ಡಿಯಿಲ್ಲ.
ನಿಮ್ಮ ಸಮೀಪದ "ನೆಮ್ಮದಿ ಕೇಂದ್ರ"ಗಳಿಂದ ಸಹ ಆದಾಯ, ಜನನ ಮರಣ, ವಾಸ ಸ್ಥಳ, ಕೃಷಿ ಕಾರ್ಮಿಕ, ಸಣ್ಣ ರೈತ, ಅತೀ ಸಣ್ಣ ರೈತ ಕಾರ್ಮಿಕ, ಜಾತಿ, ವಿಧವಾ ದೃಢೀಕರಣ , ಗೇಣಿ ರಹಿತ ದೃಢೀಕರಣ, ಅಂಗವಿಕಲ ಪೋಷಣಾ ವೇತನ ಮತ್ತು ಸರ್ಕಾರಿ ನೌಕರಿ ಇಲ್ಲದ ಪ್ರಮಾಣ ಪತ್ರಗಳನ್ನು ಪಡೆಯಲು ಅಡ್ಡಿಯಿಲ್ಲ.
ವೃತ್ತಿ ಪ್ರಮಾಣ ಪತ್ರ, ಸಂಧ್ಯಾ ಸುರಕ್ಷಾ ಯೋಜನೆಯ ಗುರುತಿನ ಚೀಟಿ ಆದಾಯ ಪ್ರಮಾಣ ಪತ್ರ, ಮತ್ತು ವಿಚಾರಣಾ ಅಧಿಕಾರಿಯ ವರದಿಯ ನಮೂನೆಗಳು ಅರ್ಜಿ ಮಂಜೂರಿಗಾಗಿ ಕಂದಾಯ ಇಲಾಖೆಗೆ ಮಾತ್ರ ಸಂಬಂಧ ಪಟ್ಟಿರುತ್ತವೆ.
ನಮೂನೆ ಸಂ.ಸು.ಯೋ ನಮೂನೆ-1.
(ನಿಯಮ 11)
ಸಂಧ್ಯಾ ಸುರಕ್ಷಾ ಯೋಜನೆ ಸಲುವಾಗಿ ಅರ್ಜಿ.
ಗ್ರಾಮ/ನಗರ...................ತಾಲೂಕ.............ಹೋಬಳಿ.................... ಜಿಲ್ಲೆ.....................
1. ಅರ್ಜಿದಾರರ ಹೆಸರು
2. ಗಂಡು ಅಥವಾ ಹೆಣ್ಣು
3. ತಂದೆಯ ಅಥವಾ ಗಂಡನ ಹೆಸರು
4. ಪೂರ್ಣ ಅಂಚೆ ವಿಳಾಸ
1. ತಾತ್ಪೂರ್ತಿಕ ವಿಳಾಸ
2. ಖಾಯಂ ವಿಳಾಸ
5. ಅರ್ಜಿ ಸಲ್ಲಿಸುವ ದಿನಾಂಕಕ್ಕೆ ವಯಸ್ಸು (ವಯಸ್ಸಿನ ದಾಖಲೆ)
ಲಗತ್ತಿಸಲಾಗಿದೆಯೇ? ಲಗತ್ತಿಸಿದ್ದರೆ, ಆ ದಾಖಲೆ ಮೂಲ ಪ್ರತಿಯೇ ಅಥವಾ ನಕಲು ಪ್ರತಿಯೇ?
6. ದೇಹದ ಮೇಲಿರುವ ಗುರುತಿನ ಚಿನ್ಹೆಗಳು
1.
2.
7. ಅರ್ಜಿದಾರರ ಸಂಬಂಧಿಕರ ಹಾಗೂ ಅವರ ವಯಸ್ಸಿನ ವಿವರ;
1.
2.
3.
4.
8. ಅರ್ಜಿದಾರರ ಹಾಗು ಅವರ ಪತಿ/ಪತ್ನಿ ಇವರ ವಾರ್ಷಿಕ ಆದಾಯ
9. ಅರ್ಜಿದಾರರ ಹಾಗು ಅವರ ಪತಿ/ಪತ್ನಿ ಇವರ ಹೆಸರಿನಲ್ಲಿರುವ ಠೇವಣಿ ಮೊತ್ತ.
1. ಮೊತ್ತ
2. ಯಾವ (ರೀತಿ) ಬ್ಯಾಂಕ/ಖಾಸಗಿ ಸಂಸ್ಥೆ.
3. ಬ್ಯಾಂಕ/ಸಂಸ್ಥೆ ವಿಳಾಸ
10. ಅರ್ಜಿದಾರರು ವೃದ್ಧಾಪ್ಯ, ವಿಧವಾ, ಅಂಗವಿಕಲ, ದೇವದಾಸಿ,
ಅಥವಾ ಇನ್ನಾವುದೇ ಸಾರ್ವಜನಿಕ ಅಥವಾ ಖಾಸಗಿ ಮೂಲಗಳಿಂದ ವಿಶ್ರಾಂತಿ
ವೇತನ ಪಡೆಯುತ್ತಿರುವರೇ? ಪಡೆಯುತ್ತಿದ್ದರೆ ವಿವರ ನೀಡಿ.11. ಅರ್ಜಿದಾರರು ವೃತ್ತಿ ನಮೂನೆ ಸಂ.ಸು.ಯೋ-1 (ಬಿ)
ಅಡಿಯಲ್ಲಿ ವೃತ್ತಿ ಪ್ರಮಾಣ ಪತ್ರ ಲಗತ್ತಿಸಲಾಗಿದೆಯೇ?
12. ಅರ್ಜಿಗೆ ಲಗತ್ತಿಸಿರುವ ದಾಖಲೆಗಳು
1. ವಯಸ್ಸಿನ ಪ್ರಮಾಣ ಪತ್ರ 2. ವೃತ್ತಿ ಪ್ರಮಾಣ ಪತ್ರ
3. ರಹವಾಸಿ ಪ್ರಮಾಣ ಪತ್ರ 4. ಠೇವಣಿ ಕುರಿತು ಶಪಥ ಪತ್ರ.
5. ಪಾಸ್ ಪೋರ್ಟ ಆಕಾರದ ನಾಲ್ಕು ಪೋಟೋ.
6. ಸ್ಥಾನಿಕ ಕಂದಾಯ ಪ್ರಾಧಿಕಾರದ ಆದಾಯ ಪ್ರಮಾಣ ಪತ್ರ.
ಮೇಲೆ ನಮೂದಿಸಿದ ವಿವರಗಳು ನನಗ ತಿಳಿದ ಮಟ್ಟಿಗೆ ಸರಿಯಾಗಿವೆ. ಒಂದು ವೇಳೆ ಯಾವುದೇ ಮಾಹಿತಿ ಯಾವುದೇ ಸಮಯದಲ್ಲಿ ಅಸತ್ಯವೆಂದು ಕಂಡುಬಂದರೆ ಈ ಯೋಜನೆಯಡಿ ಪಡೆದ ವೇತನವನ್ನು ಸರಕಾರಕ್ಕೆ ಮರು ಸಂದಾಯ ಮಾಡಲು ಸಿದ್ಧನಿರುತ್ತೇನೆ.
ಸ್ಥಳ:
ದಿನಾಂಕ: ಅರ್ಜಿದಾರರ ಸಹಿ ಅಥವಾ ಎಡಗೈ ಹೆಬ್ಬಟ್ಟಿನ ಗುರ್ತು.