ಹಿಂದಿನ ಪುಟ Select Language

ಪರಿಚಯ:

  ಪ್ರಖ್ಯಾತ ಆಡಳಿತಗಾರರಾದ ಸರ್.ಥಾಮಸ್ ಮನ್ರೋ ಹೇಳಿದ್ದಾರೆ “ಭಾರತದಲ್ಲಿ ಯಾವನಾದರೂ ಜಮೀನಿನ ಕಂದಾಯವನ್ನು ನಿಯಂತ್ರಿಸುತ್ತಾನೋ, ನಿಜವಾಗಿಯೂ ದೇಶದ ಮುಖ್ಯ ವಾಹಿನಿಯನ್ನು ತನ್ನ ಕೈಯಲ್ಲಿ ಹಿಡಿಯುತ್ತಾನೆ “ ಇದು ಇಂದಿಗೂ ನಿಜವಾಗಿದೆ.
ಪ್ರಾರಂಭದಲ್ಲಿ ಭೂ ಕಂದಾಯವನ್ನು ವಸೂಲು ಮಾಡುವುದು ಕಂದಾಯ ಇಲಾಖೆಯ ಮುಖ್ಯ ಕರ್ತವ್ಯವಾಗಿತ್ತು. ಭೂಕಂದಾಯ ರಾಜ್ಯದ ಆದಾಯದ ಪ್ರಮುಖ ಮೂಲವಾಗಿತ್ತು. ಇದಲ್ಲದೇ, ಇತರ ಸಹೋದರಿ ಇಲಾಖೆಗಳ ಮೇಲಿನ ನಿಯಂತ್ರಣವನ್ನು ಹೊಂದಿದಂತೆ ಇಲಾಖೆಯು ಜಿಲ್ಲೆಯ ಸಾಮಾನ್ಯ ಆಡಳಿತವನ್ನು ನೋಡಿಕೊಳ್ಳುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಯು ಇಲಾಖೆಯ ಅತ್ಯಂತ ಮಹತ್ವದ ಕರ್ತವ್ಯಗಳಲ್ಲಿ ಒಂದಾಗಿದೆ.
ಸರ್ಕಾರದ ಅನೇಕ ಸಾಮಾಜಿಕ ಆರ್ಥಿಕ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಕಂದಾಯ ಇಲಾಖೆಯು ಯಾವುದಕ್ಕೂ ಎರಡನೇ ಸ್ಥಾನದಲ್ಲಿ ಇಲ್ಲ ಎಂದು ಹೇಳಿದರೆ ಉತ್ಪ್ರೇಕ್ಷೆಯಾಗಲಾರದು.

ವಿವಿಧ ಹಂತಗಳಲ್ಲಿನ ಕಂದಾಯ ಇಲಾಖೆಯ ಆಡಳಿತ ವ್ಯವಸ್ಥೆ
ಕಂದಾಯ ಇಲಾಖೆಯ ಆಡಳಿತ ವ್ಯವಸ್ಥೆಯನ್ನು ಈ ಕೆಳಗಿನಂತೆ 4 ಹಂತಗಳಲ್ಲಿ ವರ್ಗೀಕರಿಸಬಹುದಾಗಿದೆ. ಅಂದರೆ;
• ದೇಶದ ಸ್ವಾತಂತ್ರ್ಯದ ಸಮಯದಲ್ಲಿ
• ಹಿಂದಿನ ಮುಂಬಯಿ ರಾಜ್ಯದಲ್ಲಿ
• 1956ರ ನಂತರ
• ಈಗಿನ ವ್ಯವಸ್ಥೆ
ಈ 4 ಹಂತಗಳ ಸಂಕ್ಷಿಪ್ತ ವರ್ಣನೆ ಈ ಕೆಳಗಿನಂತಿದೆ:

I) ದೇಶದ ಸ್ವಾತಂತ್ರ್ಯದ ಸಮಯದಲ್ಲಿ:
ಈಗ ಕರ್ನಾಟಕ ರಾಜ್ಯದಲ್ಲಿ ಸೇರ್ಪಡೆಯಾದ ಪ್ರದೇಶವು, ಹೈದ್ರಾಬಾದ್ ಮತ್ತು ಮೈಸೂರು 2 ರಾಜ್ಯಗಳೊಂದಿಗೆ ಮತ್ತು ಮದ್ರಾಸಿನ ಬ್ರಿಟಿಷ್ ಪ್ರೋವಿನ್ಸ್ಗಳು, ಮುಂಬಯಿ ಮತ್ತು ಕೂರ್ಗ್ಗಳೊಂದಿಗೆ 14 ಸ್ಥಳೀಯ ರಾಜ್ಯಗಳಲ್ಲಿ ಹಂಚಿಕೆಯಾಗಿದ್ದಿತು. ಈ 14 ಸ್ಥಳೀಯ ರಾಜ್ಯಗಳ ಪೈಕಿ, 1947 ಮತ್ತು 1950 ರ ಮಧ್ಯದಲ್ಲಿ ಮದ್ರಾಸ್ ರಾಜ್ಯದ ಬಳ್ಳಾರಿ ಜಿಲ್ಲೆಯಲ್ಲಿ ಸಂಡೂರು ವಿಲೀನಗೊಂಡಿತ್ತು ಮತ್ತು ಜಮಖಂಡಿ, ಮುಧೋಳ, ರಾಮದುರ್ಗ, ಸವಣೂರ, ಔಂಧ, ಜತ್ತ, ಕುರಂದವಾಡ ಹಿರಿಯ, ಕುರಂದವಾಡ ಕಿರಿಯ, ಸಾಂಗಲಿ, ವಾಡಿಜಾಗೀರ್, ಕೊಲ್ಹಾಪುರ ಮತ್ತು ಮೀರಜ್ ಹಿರಿಯ ಮತ್ತು ಮೀರಜ್ ಕಿರಿಯ ರಾಜ್ಯಗಳು ಮುಂಬಯಿ ರಾಜ್ಯದಲ್ಲಿ ವಿಲೀನವಾಗಿದ್ದವು ಮತ್ತು ಈ ರಾಜ್ಯಗಳಿಗೆ ಸಂಬಂಧಿಸಿದ ಕೆಲವೊಂದು ಪ್ರದೇಶಗಳು ಮುಂಬಯಿ ಕರ್ನಾಟಕದ ಬೆಳಗಾವಿ, ವಿಜಯಪುರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕಾಣಸಿಗುತ್ತವೆ.

II) . ಈ ಪೂರ್ವದ ಮುಂಬಯಿ ರಾಜ್ಯದಲ್ಲಿ:
ಮುಂಬಯಿ ರಾಜ್ಯವಿದ್ದಾಗ ಆಡಳಿತದ ಶ್ರೇಣಿಯು ಈ ಕೆಳಗಿನಂತಿತ್ತು. ಈ ವಿವರವು ದಿ:01-11-1956 ಕ್ಕೆ ಹೊಸ ರಾಜ್ಯ ಅಸ್ತಿತ್ವಕ್ಕೆ ಬರುವ ಪೂರ್ವದಲ್ಲಿನ ವ್ಯವಸ್ಥೆಗೆ ಅನ್ವಯವಾಗುತ್ತದೆ.


 

III) 1956ರ ನಂತರ (ದಿ:01-11-1956 ರಿಂದ 10-04-2003 ರವರೆಗೆ)
ಹೊಸದಾಗಿ ಪುನರ್ಘಟನೆಯಾದ ರಾಜ್ಯವು 4 ವಿಭಾಗಗಳಾಗಿ ವಿಂಗಡಣೆಯಾಗಿತ್ತು. ಈ ಮೊದಲಿನ ಮುಂಬಯ ಪ್ರೆಸಿಡೆನ್ಸಿ (1878 ರಲ್ಲಿ) ಯಲ್ಲಿ ದಕ್ಷಿಣ ವಿಭಾಗದ ಕೇಂದ್ರಸ್ಥಾನವಾಗಿದ್ದ ಬೆಳಗಾವಿಯನ್ನು ವಿಭಾಗವನ್ನಾಗಿ ಮಾಡಲಾಗಿತ್ತು ಮತ್ತು ವಿಭಾಗದ ಆಡಳಿತವನ್ನು ವಿಭಾಗಾಧಿಕಾರಿಗೆ ವಹಿಸಿಕೊಡಲಾಗಿತ್ತು.

IV) ಈಗಿರುವ ವ್ಯವಸ್ಥೆ
ದಿನಾಂಕ:08-9-2015 ರಿಂದ ಸರಕಾರವು ಪ್ರತಿ ವಿಭಾಗದ ಕೇಂದ್ರಸ್ಥಾನದಲ್ಲಿ ಪ್ರಾದೇಶಿಕ ಆಯುಕ್ತರ ಹುದ್ದೆಗಳನ್ನು ಸೃಷ್ಟಿ ಮಾಡಿದ ನಂತರ, ಕಂದಾಯ ಇಲಾಖೆಯ ವಿಭಾಗಮಟ್ಟದ ಆಡಳಿತ ವ್ಯವಸ್ಥೆಯು ಇಂತಿದೆ.

 

ಆಗಿನ “ಕಮೀಷನರ್ ದಕ್ಷಿಣ ವಿಭಾಗ”, ‘ವಿಭಾಗಾಧಿಕಾರಿ’ ಮತ್ತು ಪ್ರಸಕ್ತ ‘ಪ್ರಾದೇಶಿಕ ಆಯುಕ್ತರು’ ಇವರುಗಳ ಪಾತ್ರ ಹಾಗೂ ಅವರ ಅಧಿಕಾರಗಳು ಮತ್ತು ಕರ್ತವ್ಯಗಳು.

                                                                                                                                                                                                                                                          
1) ‘ಕಮೀಷನರ್ ದಕ್ಷಿಣ ವಿಭಾಗ’ ಇವರ ಅಧಿಕಾರ ಮತ್ತು ಕರ್ತವ್ಯಗಳು:
1. ಕಮೀಷನರ್ರು ಭೂಕಂದಾಯ ಸಂಹಿತೆ ಮತ್ತು ವಿಭಾಗದ ರೂಪಿತ ಇತರ ಯಾವುದೇ ಕಾನೂನಿನನ್ವಯ ಪ್ರದಾನ ಮಾಡಿದ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರು.
2. ಅವರು ವಿಭಾಗ ಮಟ್ಟದಲ್ಲಿ ನಿಯಂತ್ರಣ, ಮೇಲ್ಷಿಚಾರಣೆ ಮತ್ತು ಸಮನ್ವಯ ಅಧಿಕಾರಿಯಾಗಿದ್ದರು. ಕಲೆಕ್ಟರರು ಮಾಡಿದ ನಿರ್ಧಾರಗಳ ವಿರುದ್ಧ ಮೇಲ್ಮನವಿಗಳ ವಿಚಾರಣೆ ಮಾಡುವ ಮೇಲ್ಮನವಿ ಪ್ರಾಧಿಕಾರವಾಗಿದ್ದಲ್ಲದೇ ಪುನರೀಕ್ಷಣ ಅಧಿಕಾರವನ್ನು ಹೊಂದಿದ್ದರು.
3. ಕಮೀಷನರರು ತನ್ನ ಅಧೀನದಲ್ಲಿ ಬರುವ ಜಿಲ್ಲೆಗಳ ಆಡಳಿತಕ್ಕೆ ಸಂಬಂಧಿಸಿದಂತೆ ಸರ್ಕಾರದ ನೀತಿಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸುವ ಕುರಿತು ಮೇಲ್ವಿಚಾರಣೆ ಮಾಡಬೇಕಾಗಿತ್ತು.
4. ಕಮೀಷನರರು ಜಿಲ್ಲೆ ಮತ್ತು ಸರ್ಕಾರದ ನಡುವಿನ ಸಂವಹನ ಸೇತುವೆಯಾಗಿದ್ದರು.
5. ಕಮೀಷನರರು ವಿಭಾಗದ ಸಾಮಾನ್ಯ ಆಡಳಿತದ ಪ್ರಭಾರಿಯಾಗಿದ್ದರು ಮತ್ತು ವಿಭಾಗದ ಎಲ್ಲ ಕಂದಾಯ ಅಧಿಕಾರಿಗಳ ಹಾಗೂ ಕಂದಾಯ ನ್ಯಾಯಾಲಯಗಳ ಮೇಲೆ ನಿಯಂತ್ರಣ ಹೊಂದಿದ್ದರು.

2) . ಬೆಳಗಾವಿ ವಿಭಾಗದ ವಿಭಾಗಾಧಿಕಾರಿ
ವಿಭಾಗದ ಜಿಲ್ಲೆಗಳ ಸುಗಮ ಆಡಳಿತ ಮತ್ತು ಸಮನ್ವಯದ ಸಲುವಾಗಿ ಮುಂಬಯಿ ಭೂಕಂದಾಯ ಸಂಹಿತೆ 1879ರ ಕಲಂ 4 ಅಡಿಯಲ್ಲಿ ವಿಭಾಗಾಧಿಕಾರಿಯ ಹುದ್ದೆಯನ್ನು ಸೃಷ್ಟಿಸಲಾಗಿತ್ತು. ಏಕೀಕೃತ ಸಮನ್ವಯದ ಮೂಲಕ ಜಿಲ್ಲೆಗಳಿಗೆ ಏಕರೂಪದ ಆಡಳಿತವನ್ನು ನೀಡುವುದು ಮತ್ತು ಆಡಳಿತದಲ್ಲಿ ಹಾಗೂ ನೀತಿಗಳ ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲಹೆಗಳನ್ನು ನೀಡುವ ಪ್ರಮುಖ ಕರ್ತವ್ಯಗಳನ್ನು ಹೊಂದಿದ್ದರು. ಹಿಂದಿನ ಮುಂಬಯಿ ಕರ್ನಾಟಕ ಪ್ರದೇಶದಲ್ಲಿ ವಿಭಾಗಾಧಿಕಾರಿ ಹುದ್ದೆಯು 1950 ರವರೆಗೆ ಮುಂದುವರೆದಿತ್ತು ಮತ್ತು 1950 ರಿಂದ 1956 ರವರೆಗೆ ರದ್ದಾಗಿತ್ತು. ರಾಜ್ಯಗಳ ಪುನರ್ವಿಂಗಡನೆ ಆದ ನಂತರ ಅಭಿವೃದ್ಧಿ ಕಾರ್ಯಗಳು ವೃದ್ಧಿಗೊಂಡ ಕಾರಣಗಳಿಂದ ಮತ್ತು ವಿವಿಧ ಇಲಾಖೆಗಳ ನಡುವೆ ಉತ್ತಮ ಆಡಳಿತ ಹಾಗೂ ಸಮನ್ವಯತೆಯ ಕಾರಣಗಳಿಂದ ವಿಭಾಗಾಧಿಕಾರಿ ಹುದ್ದೆಯನ್ನು ಪುನ: ಪ್ರಾರಂಭಿಸುವುದು ಉಚಿತವೆಂದು ಸರ್ಕಾರವು ಭಾವಿಸಿತ್ತು. ಈ ಪರಿಣಾಮವಾಗಿ ಸರ್ಕಾರದ ಆದೇಶ ಕ್ರ:ಎಸ್ಎಸ್.4817/917/ಎಸ್ಆರ್ಡಿ/2/56/2 ದಿನಾಂಕ:24-10-1956 ರನ್ವಯ 4 ವಿಭಾಗಾಧಿಕಾರಿಗಳ ಹುದ್ದೆಗಳನ್ನು ಪೂರಕ ಸಿಬ್ಬಂದಿಯೊಂದಿಗೆ ಸೃಷ್ಟಿಸಲಾಯಿತು. ದಿನಾಂಕ:1-11-1956 ರಿಂದ 31-3-2003 ರವರೆಗೆ (46 1/2 ವರ್ಷಗಳು) ಪುನ: ದಿನಾಂಕ:11-4-2003 ರಿಂದ ರದ್ದಾಗುವವರೆಗೆ ವಿಭಾಗಾಧಿಕಾರಿಗಳ ಕಚೇರಿಯು ಕಾರ್ಯನಿರ್ವಹಿಸುತ್ತಿತ್ತು.

3) ವಿಭಾಗಾಧಿಕಾರಿಗಳ ಅಧಿಕಾರ ಮತ್ತು ಕರ್ತವ್ಯಗಳು:
ಕಂದಾಯ ಆಡಳಿತದ ಮುಖ್ಯಸ್ಥರಾದ ವಿಭಾಗಾಧಿಕಾರಿಗಳು ಜಿಲ್ಲೆಯ ಕಂದಾಯ ಮತ್ತು ವಿಭಾಗದ ಇತರ ಅನೇಕ ಇಲಾಖೆಗಳ ಕಾರ್ಯಗಳ ಸಾಮಾನ್ಯ ಅಡಳಿತದಲ್ಲಿ ಪ್ರಮುಖವಾದ ಪಾತ್ರನಿರ್ವಹಿಸಿದ್ದರು.
1. ರಾಜ್ಯ ಸರ್ಕಾರ ಮತ್ತು ಜಿಲ್ಲಾ ಪ್ರಾಧಿಕಾರಗಳ ನಡುವಿನ ಕೊಂಡಿಯಾಗಿ ವಿಭಾಗಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರು.
2. ಅವರು ವಿಭಾಗದ ಮುಖ್ಯಕಂದಾಯ ಅಧಿಕಾರಿಯಾಗಿದ್ದರು.
3. ಅವರು ತನ್ನ ಕಾರ್ಯವ್ಯಾಪ್ತಿಯಲ್ಲಿ ಬರುವ ಸ್ಥಳೀಯ ಸಂಸ್ಥೆಗಳ ಸಮಗ್ರ ಮೇಲ್ವಿಚಾರಣೆ ಮಾಡುತ್ತಿದ್ದರು.
4. ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಸಲ್ಲಿಸುವ ಕಂದಾಯ ವಿಷಯಗಳ, ಅಭಿವೃದ್ಧಿ ಕಾರ್ಯಕ್ರಮಗಳ, ಪೌರಾಡಳಿತದ, ಇತ್ಯಾದಿ ಎಲ್ಲ ಪ್ರಸ್ತಾವನೆಗಳನ್ನು ವಿಭಾಗಾಧಿಕಾರಿಗಳ ಮುಖಾಂತರ ಸಲ್ಲಿಸುವ ಕುರಿತಂತೆ ಅವರು ಪ್ರಮುಖ ಸೇತುವೆಯಾಗಿದ್ದರು.
5. ವಿಭಾಗದ ಆಡಳಿತದ ಮುಖ್ಯಸ್ಥರಾಗಿ ಅಧೀನ ಕಚೇರಿಗಳಿಗೆ ಬಜೆಟ್ ಅನುದಾನವನ್ನು ಹಂಚುವ ಮತ್ತು ಪುನರ್ ವಿನಿಯೋಗ ಮಾಡುವ ಜವಾಬ್ದಾರಿ ಹೊಂದಿದ್ದರು.
6. ಕಂದಾಯ ಆಡಳಿತಕ್ಕೆ ಸಂಬಂಧಿಸಿದ ವಿಷಯಗಳಿಗೆ ಕಾಯ್ದೆಗಳ ಮತ್ತು ಕಂದಾಯ ಸಿಬ್ಬಂದಿಗಳ ಶಿಸ್ತು ನಡವಳಿಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಮೇಲೆ ವಿಭಾಗಾಧಿಕಾರಿಗಳು ಮೇಲ್ಮನವಿ ಪ್ರಾಧಿಕಾರವಾಗಿದ್ದರು.
7. ಹಕ್ಕು ದಾಖಲಾತಿ ನಿರ್ವಹಣೆ, ಭೂ ಕಂದಾಯ ವಸೂಲಿ ಮತ್ತು ಎಲ್ಲ ತರಹದ ಸರ್ಕಾರಿ ಬಾಕಿಗಳ ವಸೂಲಿ, ಜಮಾಬಂದಿ ನಡೆಸುವುದು, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ, ಸಂಸತ್, ರಾಜ್ಯ ವಿಧಾನಸಭೆ ಮತ್ತು ಸ್ಥಳೀಯ ಪ್ರಾಧಿಕಾರದ ಚುನಾವಣೆಗಳಿಗೆ ಸಂಬಂಧಿಸಿದ ಮೇಲ್ವಿಚಾರಣೆ, ಜನಗಣತಿ ನಡೆಸುವುದು ಇತ್ಯಾದಿಗಳು ಪ್ರಮುಖ ಕರ್ತವ್ಯಗಳಾಗಿದ್ದವು.

ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ವಿಭಾಗಾಧಿಕಾರಿಯ ಕರ್ತವ್ಯಗಳು, ಮೇಲ್ವಿಚಾರಕ, ನಿಯಂತ್ರಣ, ಸಮನ್ವಯ ಮತ್ತು ಮೇಲ್ಮನವಿಗೆ ಸಂಬಂಧಿಸಿದ್ದಾಗಿದ್ದವು.

 

3. ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ.
ವಿಭಾಗಾಧಿಕಾರಿಗಳ ಹುದ್ದೆ ರದ್ದಾದ ನಂತರ ಸರ್ಕಾರದ ಆದೇಶ ಕ್ರ: ಆರ್ಡಿ/09/ಬಿಎಂಎಂ/2003 ದಿನಾಂಕ:8-9-2015 ರನ್ವಯ ಆ ಹುದ್ದೆಯನ್ನು ಪ್ರಾದೇಶಿಕ ಆಯುಕ್ತರೆಂದು ಪುನ: ಸೃಜಿಸಲಾಯಿತು. ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಕಚೇರಿಯ ದಿನಾಂಕ:14-11-2005 ರಿಂದ ಕಾರ್ಯನಿರ್ವಹಿಸುತ್ತಿದೆ.

ಪ್ರಾದೇಶಿಕ ಆಯುಕ್ತರ ಹುದ್ದೆಯನ್ನು ಹೊಸದಾಗಿ ಸೃಷ್ಟಿಸಲಾಗಿದ್ದರೂ ಅದು ಹಿಂದಿನ ವಿಭಾಗಾಧಿಕಾರಿ ಹುದ್ದೆಯಂತೆಯೇ ಇರುತ್ತದೆ.


ಸರ್ಕಾರದ ಆದೇಶ ದಿನಾಂಕ:08-9-2005 ರನ್ವಯ, ಪ್ರಾದೇಶಿಕ ಆಯುಕ್ತರ ಅಧಿಕಾರ ಮತ್ತು ಕರ್ತವ್ಯಗಳು ಈ ಕೆಳಗಿನಂತಿವೆ:-
•ಕಂದಾಯ ಇಲಾಖೆಯ ಸಿಬ್ಬಂದಿ, ಅಭಿವೃದ್ಧಿ, ತರಬೇತಿ ಮತ್ತು ಮಾನವ ಸಂಪನ್ಮೂಲ ನಿರ್ವಹಣೆ
•ಜಿಲ್ಲೆ, ಉಪವಿಭಾಗ, ತಾಲ್ಲೂಕು, ಹೋಬಳಿ ಮತ್ತು ಗ್ರಾಮ ಮಟ್ಟದ ಕಂದಾಯ ಲೆಕ್ಕಪತ್ರಗಳು, ತಪಾಸಣೆಗೊಂಡ ಲೆಕ್ಕಪತ್ರಗಳ ನಿರ್ವಹಣೆ, ವಾರ್ಷಿಕ ತಪಾಸಣೆ, ಅನಿರೀಕ್ಷಿತ ತಪಾಸಣೆಗಳು ಮತ್ತು ವಾರ್ಷಿಕ ಜಮಾಬಂದಿ.
•ಈ ಹಿಂದಿನ ವಿಭಾಗಾಧಿಕಾರಿಗಳು ನಿರ್ವಹಿಸುತ್ತಿದ್ದ ವಿವಿಧ ನಿಯಮಗಳು ಮತ್ತು ಉಪನಿಯಮಗಳಡಿಯಲ್ಲಿನ ಅಧಿಕಾರಗಳು (ಮೇಲ್ಮನವಿ ಮತ್ತು ರಿವಿಜನ್)
•ಮುದ್ರಾಂಕ ಮತ್ತು ನೋಂದಣಿ ಫೀ, ಜಮೀನಿನ ಮೋಜಣಿ ಮತ್ತು ಭೂದಾಖಲೆಗಳು, ಮುಜರಾಯಿ ಕಚೇರಿಯ ಆಡಳಿತಕ್ಕೆ ಸಂಬಂಧಿಸಿದಂತೆ ಮೇಲ್ವಿಚಾರಣೆ
•ತಪಾಸಣಾ ಅಧಿಕಾರಿ - ಸರ್ಕಾರದ ಆದೇಶಗಳು ಮತ್ತು ನಿರ್ದೇಶನಗಳನ್ವಯ ಮತ್ತು ಕಾಯ್ದೆಗಳನ್ವಯ ಅಧೀನ ಕಾರ್ಯಾಲಯಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ತಪಾಸಣೆ ನಡೆಸುವುದು.
•ಪ್ರಕೃತಿ ವಿಕೋಪ ಮತ್ತು ಬರಪರಿಹಾರ ಕಾಮಗಾರಿಗಳು ಮತ್ತು ಬೆಳೆ ಕಟಾವು, ಪ್ರಾತ್ಯಷಿಕೆ ಮತ್ತು ಭೂಕಂದಾಯ ಮನ್ನಾ ಕುರಿತ ವಿಷಯಗಳ ಮೇಲ್ವಿಚಾರಣೆ.
•ವಿಭಾಗದಲ್ಲಿನ ಎಲ್ಲ ವಿವಿಧ ಚುನಾವಣೆಗಳ ಮೇಲ್ವಿಚಾರಣೆ
•ಜಮೀನು ಮಂಜೂರಾತಿ, ಭೂಸ್ವಾಧೀನ, ಭೂ ಅಭಿವೃದ್ಧಿ, ಭೂ ಕಂದಾಯ ವಸೂಲಿ, ಜಮೀನುಗಳ ಮೋಜಣಿ, ಕಂದಾಯ ಇಲಾಖೆಯ ಗಣಕೀಕರಣ ಇತ್ಯಾದಿ ವಿಷಯಗಳ ಮೇಲ್ವಿಚಾರಣೆ
•ಜಿಲ್ಲಾ, ಉಪವಿಭಾಗ ಮತ್ತು ತಾಲ್ಲೂಕು ಮಟ್ಟದ ಕಚೇರಿಗಳಿಗೆ ಅನುದಾನ ಹಂಚಿಕೆ, ವಾರ್ಷಿಕ ಆಯವ್ಯಯ ತಯಾರಿಕೆ, ವಿಧಾನಸಭೆ/ವಿಧಾನ ಪರಿಷತ್ತಿನ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಉತ್ತರಗಳನ್ನು ತಯಾರಿಸುವುದು ಮತ್ತು ಸಂಬಂಧಿಸಿದ ಉಪಸಮಿತಿಗಳಿಗೆ ಸಲ್ಲಿಸುವುದು ಮತ್ತು ಕಂದಾಯ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ತಪಾಸಣೆ ಮಾಡುವುದು.
•ತನ್ನ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲ ಸರ್ಕಾರಿ ಕಚೇರಿಗಳ ಎಲ್ಲ ಅಭಿವೃದ್ಧಿ ಕಾಮಗಾರಿಗಳ ಸಮೀಕ್ಷೆಯನ್ನು ಕನಿಷ್ಟ ತಿಂಗಳಿಗೊಮ್ಮೆ ಮಾಡುವುದು.
•ಆರ್ಥಿಕ ಮತ್ತು ಭೌತಿಕ ಗುರಿಗಳ ಕುರಿತು ಪ್ರಗತಿ ಸಾಧಿಸದೇ ಇದ್ದಲ್ಲಿ, ಆ ಕುರಿತು ಕ್ರಮ ಜರುಗಿಸುವುದು ಮತ್ತು ಅದರ ಬಗ್ಗೆ ಸಂಬಂಧಿಸಿದ ಇಲಾಖಾ ಮುಖ್ಯಸ್ಥರು, ಕಾರ್ಯದರ್ಶಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸುವುದು ಮತ್ತು ನಿಗದಿತ ಗುರಿ ಸಾಧಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದು.
•ಇದರೊಂದಿಗೆ ಅಭಿವೃದ್ಧಿ ಇಲಾಖೆಗಳ ತಪಾಸಣೆ ಮತ್ತು ಅಗತ್ಯವೆನಿಸಿದಲ್ಲಿ ಸಮೀಕ್ಷೆ ಮಾಡುವುದು

ಅಭಿವೃದ್ಧಿ ಆಯುಕ್ತರು, ಉತ್ತರ ಕರ್ನಾಟಕ ಬೆಳಗಾವಿ ಈ ಹುದ್ದೆಯು ರದ್ದಾದ ನಂತರ ಸರ್ಕಾರದ ಅಧಿಸೂಚನೆ ಕ್ರ:ಎಸ್ಪಿಡಿ/70/ಎಚ್ಕೆಡಿಬಿ/2005 ದಿನಾಂಕ:09-12-2015 ರನ್ವಯ ಬೆಳಗಾವಿ ವಿಭಾಗದ 7 ಜಿಲ್ಲೆಗಳಿಗೆ ಸಂಬಂಧಿಸಿದಂತೆ ಅಭಿವೃದ್ಧಿ ಆಯುಕ್ತರಿಗೆ ನೀಡಿದ್ದ ಕರ್ತವ್ಯಗಳನ್ನು ಸಹ ಪ್ರಾದೇಶಿಕ ಆಯುಕ್ತರಿಗೆ ವಹಿಸಲಾಗಿದೆ.


ಈ ಮೇಲೆ ವಿವರಿಸಿದ ಆಡಳಿತಾತ್ಮಕ ಅಧಿಕಾರಗಳನ್ನು ಹೊರತುಪಡಿಸಿ ಸರ್ಕಾರವು ಒಟ್ಟು - ವಿವಿಧ ಕಾಯ್ದೆ / ನಿಯಮಗಳ ಅಡಿಯಲ್ಲಿ ಶಾಸನಬದ್ಧ ಅಧಿಕಾರಗಳನ್ನು ನೀಡಿದೆ.

ಸರ್ಕಾರದ ಅಧಿಸೂಚನೆ ಕ್ರ:ಆರ್ಡಿಪಿ-20-ಝಡ್ಪಿಎಸ್-2006 ದಿನಾಂಕ: 28-4-2007 ರನ್ವಯ ಜಿಲ್ಲಾ ಪಂಚಾಯತಿಗಳ ತಪಾಸಣೆ ಕೈಕೊಳ್ಳುವ ಅಧಿಕಾರವನ್ನು ನೀಡಿದೆ.

ಸರ್ಕಾರದ ಆದೇಶ ಕ್ರಮಾಂಕ: ಆರ್ಡಿ – 227-ಸಮಿತಿ -2007 ದಿ:05-12-2007 ರನ್ವಯ ಪ್ರಾದೇಶಿಕ ಆಯುಕ್ತರನ್ನು ಇಲಾಖೆಯ ಪ್ರಧಾನ ಮುಖ್ಯಸ್ಥರನ್ನಾಗಿ